28 DEC 2021
ದಿನಾಂಕ 28/12/2021ರಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಂದ ಮೈಸೂರು ಮೃಗಾಲಯಕ್ಕೆ ನೂತನವಾಗಿ ಆಗಮಿಸಿರುವ ಗೊರಿಲ್ಲಾಗಳನ್ನು ವೀಕ್ಷಕರ ವೀಕ್ಷಣೆಗೆ ಬಿಡುವ ಕಾರ್ಯಕ್ರಮದ ಉದ್ಘಾಟನೆ

ಶ್ರೀ ಚಾಮರಾಜೇಂದ್ರ ಮೃಗಾಲಯವು 1892ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾದ ಗೌರವಾನ್ವಿತ ಶ್ರೀ ಚಾಮರಾಜೇಂದ್ರ ಒಡೆಯರ್ ಬಹೂದ್ದೂರ್ ಅವರಿಂದ ಸ್ಥಾಪಿತವಾಗಿದೆ. ಈ ಮೃಗಾಲಯವು ಮೈಸೂರು ನಗರದ ಹೃದಯ ಭಾಗದಲ್ಲಿದ್ದು 80.13 ಎಕರೆಗಳ ಪ್ರದೇಶವನ್ನು ಹೊಂದಿದೆ.

ಈ ಮೃಗಾಲಯವು ಭಾರತ ದೇಶದಲ್ಲಿ ಅತ್ಯಂತ ಹಳೆಯ ಮೃಗಾಲಯಗಳಲ್ಲಿ ಒಂದಾಗಿದ್ದು ü 145ಕ್ಕೂ ಹೆಚ್ಚು ಜಾತಿಯ ಒಟ್ಟು 1450ಕ್ಕಿಂತ ಹೆಚ್ಚು ಸಂಖ್ಯೆಯ ಪ್ರಾಣಿಗಳಿರುತ್ತವೆ. ಮೈಸೂರು ಮೃಗಾಲಯಕ್ಕೆ ವರ್ಷಕ್ಕೆ (2020 ಮತ್ತು 2021ನೇ ವರ್ಷ ಹೊರತುಪಡಿಸಿ) ಸುಮಾರು 30 ರಿಂದ 35 ಲಕ್ಷ ವೀಕ್ಷಕರು ಭೇಟಿ ನೀಡುತ್ತಿದ್ದು, ವಿಶ್ವಮಟ್ಟದಲ್ಲಿಯೆ ಮನ್ನಣೆ ಗಳಿಸಿದೆ.

ಮೈಸೂರು ಮೃಗಾಲಯದಲ್ಲಿರುವ ಗೊರಿಲ್ಲಾಗಳ ಬಗ್ಗೆ ಸಂಕ್ಷಿಪ್ತ ವಿವರಣೆ

ಮೈಸೂರು ಮೃಗಾಯದಲ್ಲಿ 1977ರ ವರ್ಷದಲ್ಲಿ ಜರ್ಮಿನಿ ಮೃಗಾಲಯದಿಂದ ಒಂದು ಜೊತೆ ಗೊರಿಲ್ಲಾಗಳನ್ನು ಮೊಟ್ಟಮೊದಲ ಬಾರಿಗೆ ತರಿಸಿಕೊಳ್ಳಲಾಗಿರುತ್ತದೆ. ನಂತರ 1995ರಲ್ಲಿ ಪೆÇೀಲೋ ಎಂಬ ಹೆಸರಿನ ಸಿಲ್ವರ್ ಬ್ಯಾಕ್ ಗೊರಿಲ್ಲಾವನ್ನು ಮೃಗಾಲಯಕ್ಕೆ ತರಲಾಗಿದ್ದು, ಮೈಸೂರು ಮೃಗಾಲಯದ ಆಕರ್ಷಣೀಯ ಕೇಂದ್ರಬಿಂದುವಾಗಿದ್ದ ಪೆÇೀಲೋ (Polo) ಗೊರಿಲ್ಲಾ 2014ನೇ ಸಾಲಿನಲ್ಲಿ ವೃದ್ದಾಪ್ಯದಿಂದ ಸಾವನ್ನಪ್ಪಿದ್ದ ನಂತರ ಗೊರಿಲ್ಲಾವನ್ನು ಮೃಗಾಲಯಕ್ಕೆ ತರಲು ಸತತ ಪ್ರಯತ್ನ ನಡೆಸುತ್ತಿದ್ದರ ಫಲವಾಗಿ ಈ ವರ್ಷದ ಆಗಸ್ಟ್ 19ರಂದು ಜರ್ಮನಿಯಿಂದ 2 ಗಂಡು ಗೊರಿಲ್ಲಾಗಳನ್ನು ತರುವಲ್ಲಿ ಯಶಸ್ವಿಯಾಗಿದೆ.

ಗೊರಿಲ್ಲಾಗಳಿಗೆ ಮೊದಲಿದ್ದ ಆವರಣವು ಅಂತರ ರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕವಾಗಿ ವಿನ್ಯಾಸಗೊಂಡಿಲ್ಲವಾದ್ದರಿಂದ ಗೊರಿಲ್ಲಾಗಳಿಗೆ ವಿಶ್ವಮಟ್ಟದ ವಿನ್ಯಾಸವುಳ್ಳ ಮನೆಯನ್ನು ನಿರ್ಮಾಣ ಮಾಡುವುದು ಅವಶ್ಯವಾದ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಪರಿಸ್ಥಿತಿಯಲ್ಲಿ ಇಂತಹ ಒಂದು ಮನೆ ನಿರ್ಮಾಣಕ್ಕೆ ಇನ್ಪೋಸಿಸ್ ¥sóËಂಡೇಷನ್ಸ್‍ನ ಅಧ್ಯಕ್ಷರಾದ ಶ್ರೀಮತಿ ಸುಧಾಮೂರ್ತಿ ಇವರು ಸಿ.ಎಸ್.ಆರ್. ಸ್ಕೀಂ ಅಡಿಯಲ್ಲಿ ರೂ.270 ಲಕ್ಷಗಳನ್ನು ವಿನಿಯೋಗಿಸಿ ನವೀನ ಗೊರಿಲ್ಲಾ ಪ್ರಾಣಿಮನೆಯನ್ನು ನಿರ್ಮಿಸಿ ಕೊಟ್ಟಿರುತ್ತಾರೆ. ಕುಟುಂಬ ಗುಂಪಿನ ಗೊರಿಲ್ಲಾಗಳ ಮನೆ ನಿರ್ಮಾಣಕ್ಕಾಗಿಯೂ ಸುಮಾರು ರೂ.3.6 ಕೋಟಿಗಳನ್ನು ಸಿ.ಎಸ್.ಆರ್. ಸ್ಕೀಂ ಅಡಿಯಲ್ಲಿ ನೀಡಲು ಒಪ್ಪಿದ್ದು, ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿರುತ್ತದೆ. ಗೊರಿಲ್ಲಾಗಳ ಮನೆಯ ಆಧುನಿಕ ವಿನ್ಯಾಸವನ್ನು ಪೆÇಲ್ಯಾಂಡ್ ದೇಶದ ನಾಡಿಯ ರಿಲೇ ಇವರು ಮಾಡಿಕೊಟ್ಟಿರುತ್ತಾರೆ.


“ತಾಬೊ” (Thabo) (14 ವರ್ಷ) ಮತ್ತು “ಡೆಂಬ” (Demba) (8 ವರ್ಷ) ಎಂಬ ಹೆಸರಿನ ಎರಡು ಗಂಡು ಗೊರಿಲ್ಲಾಗಳನ್ನು ಜರ್ಮನಿಯ ಆಲ್‍ವೆಟರ್ ಮೃಗಾಲಯದಿಂದ ದಿನಾಂಕ 19/8/2021ರಂದು ಮೈಸೂರು ಮೃಗಾಲಯಕ್ಕೆ ತರಿಸಿಕೊಳ್ಳಲಾಗಿರುತ್ತದೆ. ಇವುಗಳು ಪಶ್ಚಿಮ ತಗ್ಗುಪ್ರದೇಶದ ಗೊರಿಲ್ಲಾಗಳಾಗಿದ್ದು, ಸ್ಥಳೀಯ ಜೀವವೈವಿಧ್ಯತೆಯಲ್ಲಿ ಗೊರಿಲ್ಲಾಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.

ಅರಣ್ಯಪ್ರದೇಶದಲ್ಲಿ ಇವುಗಳ ಜೀವಿತಾವಧಿ 35 ವರ್ಷಗಳಾದರೆ ಮೃಗಾಲಯದಲ್ಲಿ 60 ವರ್ಷಗಳು. ಯುರೋಪಿಯನ್ ಅಸೋಷಿಯೇಷನ್ಸ್ ಆಫ್ ಜûೂಸ್ ಅಂಡ್ ಅಕ್ವೇರಿಯ ಸಂಸ್ಥೆಯು (EAZA-European Association of Zoos and Aquaria) ಸಂಸ್ಥೆಯ ಮೂಲಕ ಯುರೋಪಿಯನ್ ಎಂಡೇಜರ್ಡ್ ಸ್ಪೀಷೀಸ್ ಪೆÇ್ರೀಗ್ರಾಂ (EEP - European Endangered Species Programme) ಅಡಿಯಲ್ಲಿ ಮೈಸೂರು ಮೃಗಾಲಯಕ್ಕೆ ಗೊರಿಲ್ಲಾಗಳನ್ನು ಮತ್ತೆ ಪಡೆಯಲಾಗಿದೆ.

ಪ್ರಸ್ತುತ, ನಮ್ಮ ದೇಶದಲ್ಲಿ ಗೊರಿಲ,್ಲ ಒರಾಂಗೂಟಾನ್, ಆಫೀಕಾದ ಘೇಂಡಾಮೃಗ ಮತ್ತು ಆಫ್ರೀಕಾದ ಚೀತ್ಹಾ ಮೈಸೂರು ಮೃಗಾಲಯದಲ್ಲಿರುವುದು ನಮ್ಮ ರಾಜ್ಯಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ.


ಗೊರಿಲ್ಲಾಗಳನ್ನು ದಿನಾಂಕ 28/12/2021ರಂದು ಬೆಳಿಗ್ಗೆ 11.00 ಘಂಟೆಗೆ ವೀಕ್ಷಕರ ವೀಕ್ಷಣೆಗೆ ಬಿಡುವ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಎಸ್.ಟಿ. ಸೋಮಶೇಖರ್, ಮಾನ್ಯ ಅರಣ್ಯ ಮಂತ್ರಿಗಳಾದ ಮಾನ್ಯ ಶ್ರೀ ಉಮೇಶ ವಿಶ್ವನಾಥ ಕತ್ತಿ, ಇನ್ಪೋಸಿಸ್ ¥sóËಂಡೇಷನ್ಸ್‍ನ ಅಧ್ಯಕ್ಷರಾದ ಶ್ರೀಮತಿ ಸುಧಾಮೂರ್ತಿ, ಸ್ಥಳೀಯ ಲೋಕ ಸಭಾ ಮತ್ತು ವಿಧಾನ ಸಭಾ ಸದಸ್ಯರುಗಳು, ಇತರೆ ಜನಪ್ರತಿನಿಧಿಗಳು ಹಾಗೂ ಮೈಸೂರು ಜಿಲ್ಲಾ ಆಡಳಿತದ ಎಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗೊರಿಲ್ಲಾಗಳನ್ನು ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಿದ್ದಾರೆ ಎಂದು ತಿಳಿಸಲು ಮೈಸೂರು ಮೃಗಾಲಯವು ಹರ್ಷಿಸುತ್ತದೆ.

ಅಜೀತ ಕುಲಕರ್ಣಿ ಭಾ.ಅ.ಸೇ.,

ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು, ಶ್ರೀ ಚಾಮರಾಜೇಂದ್ರ ಮೃಗಾಲಯ, ಮೈಸೂರು

CHECK OUT MORE

02 MAR 2022

ದಿನಾಂಕ 2/3/2022ರಂದು ಸನ್ಮಾನ್ಯ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಮೈಸೂರು ಮೃಗಾಲಯದ ಪ್ರವೇಶದ್ವಾರದ ಬಳಿ

Read More..
17 DEC 2021

Mysuru Zoo is pleased to announce that a female Zebra named Prachi has given birth to a female foal on 11/12/2021.

Read More..
27 OCT 2021

Mysuru Zoo is happy to announce that the newly built Orangutan Facility, with the financial assistance

Read More..
5 APR 2020

Hon'ble Ministers ST Somashekar & B A Basavaraj handedover cheques worth Rs105.14 lakhs for adoption

Read More..
REACH US
Sri Chamarajendra Zoological Gardens, Zoo Main Road Indiranagar, Mysore, Karnataka 570010
0821 244 0752
VISITORS COUNT
web counter