 
          ಶ್ರೀ ಚಾಮರಾಜೇಂದ್ರ ಮೃಗಾಲಯವು 1892ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾದ ಗೌರವಾನ್ವಿತ ಶ್ರೀ ಚಾಮರಾಜೇಂದ್ರ ಒಡೆಯರ್ ಬಹೂದ್ದೂರ್ ಅವರಿಂದ ಸ್ಥಾಪಿತವಾಗಿದೆ. ಈ ಮೃಗಾಲಯವು ಮೈಸೂರು ನಗರದ ಹೃದಯ ಭಾಗದಲ್ಲಿದ್ದು 80.13 ಎಕರೆಗಳ ಪ್ರದೇಶವನ್ನು ಹೊಂದಿದೆ.
ಈ ಮೃಗಾಲಯವು ಭಾರತ ದೇಶದಲ್ಲಿ ಅತ್ಯಂತ ಹಳೆಯ ಮೃಗಾಲಯಗಳಲ್ಲಿ ಒಂದಾಗಿದ್ದು ü 145ಕ್ಕೂ ಹೆಚ್ಚು ಜಾತಿಯ ಒಟ್ಟು 1450ಕ್ಕಿಂತ ಹೆಚ್ಚು ಸಂಖ್ಯೆಯ ಪ್ರಾಣಿಗಳಿರುತ್ತವೆ. ಮೈಸೂರು ಮೃಗಾಲಯಕ್ಕೆ ವರ್ಷಕ್ಕೆ (2020 ಮತ್ತು 2021ನೇ ವರ್ಷ ಹೊರತುಪಡಿಸಿ) ಸುಮಾರು 30 ರಿಂದ 35 ಲಕ್ಷ ವೀಕ್ಷಕರು ಭೇಟಿ ನೀಡುತ್ತಿದ್ದು, ವಿಶ್ವಮಟ್ಟದಲ್ಲಿಯೆ ಮನ್ನಣೆ ಗಳಿಸಿದೆ.
“ತಾಬೊ” (Thabo) (14 ವರ್ಷ) ಮತ್ತು “ಡೆಂಬ” (Demba) (8 ವರ್ಷ) ಎಂಬ ಹೆಸರಿನ ಎರಡು ಗಂಡು ಗೊರಿಲ್ಲಾಗಳನ್ನು ಜರ್ಮನಿಯ ಆಲ್‍ವೆಟರ್ ಮೃಗಾಲಯದಿಂದ ದಿನಾಂಕ 19/8/2021ರಂದು ಮೈಸೂರು ಮೃಗಾಲಯಕ್ಕೆ ತರಿಸಿಕೊಳ್ಳಲಾಗಿರುತ್ತದೆ. ಇವುಗಳು ಪಶ್ಚಿಮ ತಗ್ಗುಪ್ರದೇಶದ ಗೊರಿಲ್ಲಾಗಳಾಗಿದ್ದು, ಸ್ಥಳೀಯ ಜೀವವೈವಿಧ್ಯತೆಯಲ್ಲಿ ಗೊರಿಲ್ಲಾಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.
ಅರಣ್ಯಪ್ರದೇಶದಲ್ಲಿ ಇವುಗಳ ಜೀವಿತಾವಧಿ 35 ವರ್ಷಗಳಾದರೆ ಮೃಗಾಲಯದಲ್ಲಿ 60 ವರ್ಷಗಳು. ಯುರೋಪಿಯನ್ ಅಸೋಷಿಯೇಷನ್ಸ್ ಆಫ್ ಜûೂಸ್ ಅಂಡ್ ಅಕ್ವೇರಿಯ ಸಂಸ್ಥೆಯು (EAZA-European Association of Zoos and Aquaria) ಸಂಸ್ಥೆಯ ಮೂಲಕ ಯುರೋಪಿಯನ್ ಎಂಡೇಜರ್ಡ್ ಸ್ಪೀಷೀಸ್ ಪೆÇ್ರೀಗ್ರಾಂ (EEP - European Endangered Species Programme) ಅಡಿಯಲ್ಲಿ ಮೈಸೂರು ಮೃಗಾಲಯಕ್ಕೆ ಗೊರಿಲ್ಲಾಗಳನ್ನು ಮತ್ತೆ ಪಡೆಯಲಾಗಿದೆ.
ಪ್ರಸ್ತುತ, ನಮ್ಮ ದೇಶದಲ್ಲಿ ಗೊರಿಲ,್ಲ ಒರಾಂಗೂಟಾನ್, ಆಫೀಕಾದ ಘೇಂಡಾಮೃಗ ಮತ್ತು ಆಫ್ರೀಕಾದ ಚೀತ್ಹಾ ಮೈಸೂರು ಮೃಗಾಲಯದಲ್ಲಿರುವುದು ನಮ್ಮ ರಾಜ್ಯಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ.
ಗೊರಿಲ್ಲಾಗಳನ್ನು ದಿನಾಂಕ 28/12/2021ರಂದು ಬೆಳಿಗ್ಗೆ 11.00 ಘಂಟೆಗೆ ವೀಕ್ಷಕರ ವೀಕ್ಷಣೆಗೆ ಬಿಡುವ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಎಸ್.ಟಿ. ಸೋಮಶೇಖರ್, ಮಾನ್ಯ ಅರಣ್ಯ ಮಂತ್ರಿಗಳಾದ ಮಾನ್ಯ ಶ್ರೀ ಉಮೇಶ ವಿಶ್ವನಾಥ ಕತ್ತಿ, ಇನ್ಪೋಸಿಸ್ ¥sóËಂಡೇಷನ್ಸ್‍ನ ಅಧ್ಯಕ್ಷರಾದ ಶ್ರೀಮತಿ ಸುಧಾಮೂರ್ತಿ, ಸ್ಥಳೀಯ ಲೋಕ ಸಭಾ ಮತ್ತು ವಿಧಾನ ಸಭಾ ಸದಸ್ಯರುಗಳು, ಇತರೆ ಜನಪ್ರತಿನಿಧಿಗಳು ಹಾಗೂ ಮೈಸೂರು ಜಿಲ್ಲಾ ಆಡಳಿತದ ಎಲ್ಲಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗೊರಿಲ್ಲಾಗಳನ್ನು ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಿದ್ದಾರೆ ಎಂದು ತಿಳಿಸಲು ಮೈಸೂರು ಮೃಗಾಲಯವು ಹರ್ಷಿಸುತ್ತದೆ.
ಅಜಿತ್ ಕುಲಕರ್ಣಿ ಭಾ.ಅ.ಸೇ.,
ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ
ಕಾರ್ಯನಿರ್ವಾಹಕ ನಿರ್ದೇಶಕರು,
ಶ್ರೀ ಚಾಮರಾಜೇಂದ್ರ ಮೃಗಾಲಯ,
ಮೈಸೂರು
CHECK OUT MORE
 
                    PRIZE WINNERS OF VARIOUS COMPETITIONS HELD AS PART OF 71st WILDLIFE WEEK
Read More.. 
     
                     
                    